80 likes | 94 Views
Indic academy initiative for publishing content on Shastraas, Indic Knowledge Systems & Indology and to showcase the activities of Indic Academy.<br>Visit us:<br>https://www.indica.today/<br>
E N D
Indic academy initiative for publishing content on Shastraas, Indic Knowledge Systems & Indology and to showcase the activities of Indic Academy.Visit us:https://www.indica.today/
We publish Quick Reads (articles of less than 1500 words), Long Reads (articles with word counts between 1500 and 4000), Research Papers (more than 8000 words) and Book Reviews. We currently publish in English, Hindi, Kannada, Telugu and Sanskrit.
ಶ್ರೀರಾಮ ಉಭಯಕುಶಲೋಪರಿ, ಭರತನಿಗೆ ರಾಜಧರ್ಮ – ಭಾಗ 1
ಶ್ರೀರಾಮನವಮಿ ಮತ್ತೆ ಬಂದಿದೆ. ಯುಗಯುಗಾದಿಯಂತೆ ರಾಮನವಮಿಯೂ ಮರಳಿ ಮರಳಿ ಬರುತ್ತಲೇ ಇರುತ್ತದೆ. ನಮಗೆ ಬೇಕಾದಷ್ಟು ದಿನ ಮಾತ್ರವಲ್ಲ. ಧರ್ಮಸಂಸ್ಥಾಪನೆಯ ನಿರಂತರ ಕಾರ್ಯಕ್ಕೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಶುರುವಾದ ನಂತರ ಇದು ಮೊದಲ ರಾಮನವಮಿ. ಇಷ್ಟೊಂದು ಮೌನವಾದ ಶ್ರೀರಾಮ ನವಮಿ ಹಿಂದೆಂದೂ ಆಗಿರಲಾರದು. ಧಾಳಿಕೋರರ ಕಾಲದಲ್ಲೂ ನವಮಿಯ ಹಬ್ಬವನ್ನು ನಮ್ಮ ಪೂರ್ವಜರು ಬಿಟ್ಟಿರಲಾರರು. ಭಗವಂತ ನಮ್ಮಿಂದ ತಪಸ್ಸನ್ನು ಬಯಸುತ್ತಿದ್ದಾನೆ.
“ಹುತ್ತಗಟ್ಟದೆ ಚಿತ್ತ ಕೆತ್ತೀತೇ ಪುರುಷೋತ್ತಮನ ಆ ಅಂತ ರೂಪ ರೇಖೆ?” ಗೋಪಾಲಕೃಷ್ಣ ಪದ್ಯ. ಆ ತಪಸ್ಸಾದರೂ ಯಾವುದು. ರಾಮನ ಸಮಗ್ರರೂಪದ ಕುರಿತಾದ ಧ್ಯಾನ. • ಅಳಿಲಿಗೋಸ್ಕರ ತನ್ನ ಬತ್ತಳಿಕೆಯನ್ನೇ ಪಕ್ಕಕ್ಕಿಟ್ಟ ರಾಮನೇ ತಾಟಕಿಯ ಸಂಹಾರ ಮಾಡಿದ್ದು. • ತನ್ನ ಇರವಿನಿಂದಲೇ ಅಹಲ್ಯೆಗೆ ಶಾಪವಿಮೋಚನೆ ಮಾಡಿದ ರಾಮನೇ ಶೂರ್ಪನಖಿಯ ಮೂಗು ಕೊಯ್ದದ್ದು. • ರಾವಣನಿಗೆ ಅನೇಕ ಅವಕಾಶಗಳನ್ನು ಕೊಟ್ಟ ರಾಮನೇ ವಾಲಿಗೆ ಮರದ ಮರೆಯಿಂದ ಬಾಣ ಬಿಟ್ಟದ್ದು. • ಸೀತೆಯ ಮುಂದೆ ಅಷ್ಟು ಮೃದುವಾಗುತ್ತಿದ್ದ ರಾಮನೇ ಸಾಗರನ ಮೇಲೆ ಭಯಂಕರ ಕೋಪ ತಳೆದದ್ದು.
ಮುಂದಿನ ಭಾಗದಲ್ಲಿ ಮತ್ತಷ್ಟು ನೋಡೋಣ. ಈ ಸರ್ಗದಲ್ಲಿ ೭೬ ಶ್ಲೋಕಗಳಿವೆ. ಒಂದೊಂದರಲ್ಲೂ ಶ್ರೀರಾಮ ಅತ್ಯಂತ ಮಧುರವಾದ ಧ್ವನಿಯಲ್ಲಿ ಅತಿಮಹತ್ವಪೂರ್ಣವಾದ ರಾಜಧರ್ಮ ವಿಷಯವನ್ನು ಕುಶಲೋಪರಿಯ ಮುಖೇನ ವಿವರಿಸುದನ್ನು ಓದುವುದೇ ಒಂದು ಅನುಭವ. ರಾಮನಿಗೆ ಧರ್ಮವೇ ಮುಖ್ಯ. ಧರ್ಮಕ್ಕಾಗಿ ಯಾವುದೇ ಕಠಿಣವಾದ ನಿರ್ಧಾರ ತೆಗೆದುಕೊಳ್ಳುವುದು ರಾಮನಿಗೆ ಅತ್ಯಂತ ಸುಲಭವಾದ ವಿಚಾರ. ಏಕೆಂದರೆ ರಾಮನ ದೃಷ್ಟಿ ಅಷ್ಟು ಸ್ಪಷ್ಟ. ಆ ದೃಷ್ಟಿಗಾದರೋ ಕಠಿಣವಾದ ತಪಸ್ಸಿನ ಅಗತ್ಯವಿದೆ. ನಮಗೀಗ ಬೇಕಾಗಿರುವುದು ಇದೇ, ಧರ್ಮಸಂಸ್ಥಾಪನೆಗೆ ಯಾವ ನಿಲುವು, ಭಾವ ಅಗತ್ಯವೋ ಆ ನಿಲುವನ್ನು ತೆಗೆದುಕೊಳ್ಳುವ ಧೈರ್ಯ, ಮನೋಸ್ಥೈರ್ಯ. ಅದೇ ನಮ್ಮ ತಪಸ್ಸು. ಕೇವಲ ಧಾರ್ಮಿಕ ಸಮುದಾಯದ್ದು ಮಾತ್ರವಲ್ಲ. ರಾಷ್ಟ್ರದ ಗುಣವೂ, ಮಂತ್ರವೂ, ಸ್ವರೂಪವು ಇದೆ ಆಗಬೇಕು.
https://www.indica.today/ To Read more about blogs like this visit us: